ಕುರುಗೊಡು: ಕಮ್ಮ ಭವನ ಮುಂದಿನ ಪೀಳಿಗೆಗೆ ದೊಡ್ಡ ವೇದಿಕೆ ಆಗಲಿ : ಕುಡಿತಿನಿ ಪಟ್ಟಣದಲ್ಲಿ ಶಾಸಕಿ ಅನ್ನಪೂರ್ಣ
ನಮ್ಮಲ್ಲಿ ತಲೆತಲಾಂತರದಿಂದ ಬಂದಿರುವ ಹಿರಿಯರು ಹಾಕಿಕೊಟ್ಟ ಉಜ್ವಲ ಸಂಸ್ಕೃತಿ ಮುಂದುವರೆಸುವ ಪದ್ಧತಿ ಇದೆ. ಈ ಭವನ ಸಾಂಸ್ಕೃತಿಕ ಶೈಕ್ಷಣಿಕ ಚಟುವಟಿಕೆ ಹಾಗೂ ಮುಂದಿನ ಪೀಳಿಗೆ ಬೆಳೆಯಲು ವೇದಿಕೆ ಈ ಕಮ್ಮ ಭವನ ಆಗಬೇಕಿದೆ ಎಂದು ಸಂಡೂರು ಶಾಸಕಿ ಈ ಅನ್ನಪೂರ್ಣ ತುಕಾರಾಂ ಹೇಳಿದರು. ಜಿಲ್ಲೆಯ ಕುಡಿತಿನಿ ಪಟ್ಟಣದಲ್ಲಿ ಕಮ್ಮ ಭವನ ಭೂಮಿ ಪೂಜೆ ಭಾನುವಾರ ಬೆಳಿಗ್ಗೆ 11:30ಕ್ಕೆ ಜರುಗಿತು. ಈ ವೇಳೆ ಸಂಡೂರು ವಿಧಾನ ಸಭಾ ಕ್ಷೇತ್ರದ ಶಾಸಕಿ ಈ ಅನ್ನಪೂರ್ಣ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಕಮ್ಮ ಸಂಘದ ಭವನಕ್ಕೆ ಭೂಮಿ ಪೂಜೆಯನ್ನು ಕಮ್ಮ ಸಮಾಜದ ಸರ್ವ ಸದಸ್ಯರು ಸಮ್ಮುಖದಲ್ಲಿ ನೆರವೇರಿಸಿ ಅವರು ಮಾತನಾಡಿದರು.