ಕಾಳಗಿ ತಾಲೂಕಿನ ರಾಜಾಪುರ ಗ್ರಾಪಂಯಲ್ಲಿ ಸಂವಿಧಾನಬದ್ಧ ಪ್ರಕ್ರಿಯೆ ಮೂಲಕ ನೂತನ ಅಧ್ಯಕ್ಷರಾಗಿ ಚಂದ್ರಶೇಖರ್ ಮಳಗಿ ಅಧಿಕಾರ ಸ್ವೀಕರಿಸಿದರು. ಗ್ರಾಮ ಸ್ವರಾಜ್ ಪಂಚಾಯತ್ ಆಕ್ಟ್ ಅನ್ವಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಖಾಲಿಯಾಗಿದ್ದ ಹಿನ್ನೆಲೆಯಲ್ಲಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಚಂದ್ರಶೇಖರ್ ಮಳಗಿ ಅವರಿಗೆ ಗ್ರಾಪಂ ಅಧ್ಯಕ್ಷ ಸ್ಥಾನ ಲಭಿಸಿದೆ. ಈ ಹಿಂದಿನ ಅಧ್ಯಕ್ಷರು ಹಗರಣವೊಂದರಲ್ಲಿ ಸಿಲುಕಿ ಸ್ಥಾನದಿಂದ ವಜಾಗೊಂಡಿದ್ದು, ಉಪಾಧ್ಯಕ್ಷರು ಸಹ ಸದಸ್ಯತ್ವದಿಂದ ಅನರ್ಹಗೊಂಡಿದ್ದರು. ಇದರಿಂದ ಪಂಚಾಯತಿಯಲ್ಲಿ ಉಂಟಾಗಿದ್ದ ಆಡಳಿತಾತ್ಮಕ ಖಾಲಿತನಕ್ಕೆ ಇದೀಗ ಹೊಸ ನಾಯಕತ್ವ ದೊರೆತಿದೆ. ಈ ಕುರಿತು ಶುಕ್ರವಾರ ಏಳು ಗಂಟೆಗೆ ಮಾಹಿತಿ ಲಭ್ಯವಾಗಿದೆ..