ಕೋಗಿಲು ಉಳಿಸಿ – ಅಕ್ರಮ ವಲಸಿಗರನ್ನು ತೊಲಗಿಸಿ” ಎಂಬ ಘೋಷವಾಕ್ಯದೊಂದಿಗೆ ಬಾಗಲೂರು ಮುಖ್ಯ ರಸ್ತೆಯ ಕೌಂಟ್ರಿ ಕ್ಲಬ್ ಹತ್ತಿರ ಬಿಜೆಪಿ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಹೋರಾಟದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ವೈ. ವಿಜಯೇಂದ್ರ, ವಿಧಾನಪರಿಷತ್ ವಿಪಕ್ಷ ನಾಯಕರಾದ ಶ್ರೀ ಎನ್. ಸ್ವಾಮಿ ಚಾಲವಾಡಿ, ಬೆಂಗಳೂರು ನಗರದ ಶಾಸಕರು, ವಿಧಾನಪರಿಷತ್ ಸದಸ್ಯರು, ಸತ್ಯಶೋಧನಾ ಸಮಿತಿಯ ಸದಸ್ಯರು ಹಾಗೂ ಬಿಜೆಪಿ ಜಿಲ್ಲಾ ಅಧ್ಯಕ್ಷರು ಭಾಗವಹಿಸಿ, ಕೋಗಿಲು ಪ್ರದೇಶವನ್ನು ರಕ್ಷಿಸುವುದು ಮತ್ತು ಅಕ್ರಮ ವಲಸೆಯನ್ನು ತಡೆಯುವ ಕುರಿತು ಗಟ್ಟಿಯಾದ ಸಂದೇಶವನ್ನು ನೀಡಿದರು.