ಕೊಪ್ಪಳ: ಬಹದ್ದೂರಬಂಡಿ ಹೊಸಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ, ಯುವಕರಿಂದ ದೀರ್ಘದಂಡ ನಮಸ್ಕಾರ
Koppal, Koppal | Apr 20, 2025 ಸವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತೋತ್ಸವ ಅಂಗವಾಗಿ ತಾಲೂಕಿನ ಬಿ ಹೊಸಳ್ಳಿ ಗ್ರಾಮದಲ್ಲಿ ಐದು ಜನ ಯುವಕರಿಂದ ಡಾ.ಬಿ.ಆರ್ ಅಂಬೇಡ್ಕರ್ ಅವರ ನಾಮಫಲಕದವರೆಗೆ ದೀರ್ಘದಂಡ ನಮಸ್ಕಾರ ಹಾಕಿದರು. ವಿಶೇಷವಾಗಿ ಗ್ರಾಮದಲ್ಲಿ ಜಾತ್ರೆಯ ರೂಪದಲ್ಲಿ ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ಏಪ್ರಿಲ್ 20 ರವಿವಾರ ಸಂಜೆ ಜನರು ಮಾಡಿದ್ದಾರೆ.