ಚಾರ್ಮಾಡಿ ಘಾಟ್ ನಲ್ಲಿ ಹೊಳಲ್ಕೆರೆಯಿಂದ ಧರ್ಮಸ್ಥಳಕ್ಕೆ ಹೊರಟ ಪ್ರವಾಸಿಗರಿಗೆ ಆನೆಯೊಂದು ಅಡ್ಡ ಬಂದ ಘಟನೆ ನಡೆದಿದೆ. ಶನಿವಾರ ಬೆಳಗಿನ ಜಾವ 2 ಗಂಟೆಗೆ ಘಟನೆ ನಡೆದಿದ್ದು ಅದೃಷ್ಟವಶಾತ್ ಪ್ರವಾಸಿಗರು ಪಾರಾಗಿದ್ದಾರೆ. ಹೊಳಲ್ಕೆರೆ ಪಟ್ಟಣ ಶಾಖೆ ರೈತ ಸಂಘದ ವತಿಯಿಂದ ಪುಣ್ಯಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದರ್ಶನಕ್ಕೆ ರೈತರೆಲ್ಲರೂ ಪ್ರವಾಸ ಹೋಗುವಾಗ ಮೂಡಿಗೆರೆಯ ಚಾರ್ಮಾಡಿ ಘಾಟ್ ನ ಶನಿವಾರ ಬೆಳಗಿನ ಜಾವ 2 ಗಂಟೆಗೆ ಕಾಡಾನೆಯೂ ಮರದ ದಿಂಬಿಯನ್ನು ರಸ್ತೆಗೆ ಅಡ್ಡಲಾಗಿ ಉರುಳಿಸಿ ಸೊಪ್ಪನ್ನು ತಿನ್ನುತ್ತಿದ್ದು ಅಡ್ಡ ಹಾಕಿದೆ.