ಬಳ್ಳಾರಿ: ನಗರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಹತ್ತಿರದ ಹೆಚ್ಎಲ್ಸಿ ಕಾಲುವೆಯಲ್ಲಿ
ಅನಾಮಧೇಯ ಮೃತ ಮಹಿಳೆ; ವಾರಸುದಾರರ ಪತ್ತೆಗೆ ಮನವಿ
ನಗರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸೂಪರ್ ಪ್ಯಾಸೇಜ್ ಬ್ರೀಜ್ಡ್ ಹತ್ತಿರದ ಹೆಚ್ಎಲ್ಸಿ ಸುಮಾರು 45 ರಿಂದ 50 ವರ್ಷದ ಅನಾಮಧೇಯ ಮೃತ ಮಹಿಳೆಯ ಶವವು ತೇಲಿಕೊಂಡು ಬಂದಿದ್ದು, ಮೃತಳ ವಾರಸುದಾರರು ತಿಳಿದಿರುವುದಿಲ್ಲ. ಪತ್ತೆಗೆ ಸಹರಿಸಬೇಕು ಎಂದು ಬಳ್ಳಾರಿ ಗ್ರಾಮೀಣ ಪೊಲೀಸರು ಮನವಿ ಮಾಡಿದ್ದಾರೆ. ಚಹರೆ ಗುರುತು: ಎತ್ತರ ಅಂದಾಜು 4.5 ಅಡಿ, ಪಿಂಕ್ ಬಣ್ಣದ ಜಾಕೆಟ್ ಮತ್ತು ಕೇಸರಿ ಬಣ್ಣದ ಲಂಗ ಧರಿಸಿರುತ್ತಾಳೆ. ತಲೆ ಕೂದಲು ಉದುರಿರುತ್ತದೆ. ಎಡಗೈ ಮೇಲೆ ಈ ರಾಜು ಎಂದು ಕನ್ನಡದಲ್ಲಿ ಹಚ್ಚೆ ಗುರುತು ಹಾಗೂ ಬಲಗೈ ಮೇಲೆ ಹೂವಿನ ಡಿಜೈನ್ವುಳ್ಳ ಹಚ್ಚೆ ಗುರುತು ಇರುತ್ತದೆ. ಅನಾಮಧೇಯ ಮೃತ ಮಹಿಳೆಯ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ಅಥವಾ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣ