ನವಲಗುಂದ: ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಶ್ರೀ ಹರಿಯ ಕೃಪೆಯಿಂದ ನಿರಂತರ 7ದಿನಗಳ ಕಾಲ ನಡೆದ 13 ನೇ ವರ್ಷದ ಶ್ರೀ ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ ಹಾಗೂ ಅಖಂಡ ಹರಿನಾಮ ಉತ್ಸವ ಗುರುವಾರ ಭಕ್ತಿ ಭಾವಪೂರ್ಣವಾಗಿ ಸಮಾರೋಪಗೊಂಡಿತು. ಉತ್ಸವದ ಅವಧಿಯಲ್ಲಿ ಭಕ್ತರು ಬಾಳ ಗೋಪಾಳ, ತಾಳ, ಮೃದಂಗಗಳೊಂದಿಗೆ ಭಾಗವಹಿಸಿ ಶ್ರೀ ಜ್ಞಾನೇಶ್ವರ ಮಾವುಲಿಯ ಪಾರಾಯಣವನ್ನು ಶ್ರದ್ದೆಯಿಂದ ನೆರವೇರಿಸಿದರು. ಗುರುವಾರ ದಿನ ಅಖಂಡ ಹರಿನಾಮ, ಮಹಾ ಆರತಿ ಹಾಗೂ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.