ಕೋಲಾರ: ಅಮಾನಿಕೆರೆ ಕೋಡಿಯಲ್ಲಿ ಕಲುಷಿತ ಗಾಂಧಿನಗರಕ್ಕೆ ದುರ್ವಾಸನೆ ಸಂಕಟ
Kolar, Kolar | Nov 30, 2025 ಗಾಂಧಿನಗರದ ನಿವಾಸಿಗಳು ಹೆಚ್. ಬಿ. ಗೋಪಾಲ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಅಮಾನಿಕೆರೆಯ ಕೋಡಿ ಬಳಿ ಶೇಖರಣೆಯಾಗುತ್ತಿರುವ ಕಲುಷಿತ ಯುಜಿಡಿ ಹಾಗೂ ಚರಂಡಿ ನೀರನ್ನು ಸಂಸ್ಕರಿಸದಿರುವುದರಿಂದ ಉಂಟಾಗುತ್ತಿರುವ ತೀವ್ರ ದುರ್ವಾಸನೆಯ ಬಗ್ಗೆ ತಿಳಿಸಿದರು. ಅಮಾನಿ ಕೆರೆಯಲ್ಲಿ ನಿರ್ಮಿಸಿದ ಎರಡು ಮಿನಿ ಟ್ಯಾಂಕ್‌ಗಳ ಕಾಮಗಾರಿ ವೇಳೆ ನಡೆದ ಅವೈಜ್ಞಾನಿಕ ಕೆಲಸಗಳಿಂದ ಕೆರೆಕೋಡಿ ಹತ್ತಿರ ಚರಂಡಿ ಮತ್ತು ಯುಜಿಡಿಯಿಂದ ಬರುತ್ತಿರುವ ಕೊಳಚೆ ನೀರಿನಿಂದ ದುರ್ವಾಸನೆ ಬರುತ್ತಿದೆ ಎಂದು ಅವರು ದೂರಿದರು. ಕೂಡಲೇ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.