ಹಳಿಯಾಳ : ಪಟ್ಟಣದಲ್ಲಿರುವ ಕ್ರೀಡಾ ಭವನಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಇಂದು ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಭೇಟಿ ನೀಡಿದರು. ವಿಧಾನ ಪರಿಷತ್ ಸದಸ್ಯರ ಅನುದಾನದ ಅಡಿಯಲ್ಲಿ ಹಳಿಯಾಳ ಅರ್ಬನ್ ಯೂಥ್ ಕ್ಲಬ್ ಸಂಸ್ಥೆಗೆ ಅನುದಾನ ನೀಡಿ ಸಂಸ್ಥೆಯ ಅಭಿವೃದ್ಧಿಗೆ ಕಾರಣೀಭೂತರಾದ ಬಸವರಾಜ ಹೊರಟ್ಟಿಯವರನ್ನು ಹಳಿಯಾಳ ಅರ್ಬನ್ ಯೂಥ್ ಕ್ಲಬ್ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು ಮಾಜಿ ಶಾಸಕರಾದ ಸುನೀಲ್ ಹೆಗಡೆಯವರು ಸಭಾಪತಿ ಬಸವರಾಜ ಹೊರಟ್ಟಿಯವರನ್ನು ಆತ್ಮೀಯವಾಗಿ ಸ್ವಾಗತಿಸಿ ಗೌರವಿಸಿದರು.