ಬೆಂಗಳೂರಿನ ಬ್ಯಾಟರಾಯನಪುರ ಅಬಕಾರಿ ಕಚೇರಿಯಲ್ಲಿ ಇಂದು ಅಬಕಾರಿ ಇಲಾಖೆಯ ಉಪ ಆಯುಕ್ತ ಜಗದೀಶ್ ನಾಯಕ್, ಸೂಪರಿಂಟೆಂಡೆಂಟ್ ತಮ್ಮಣ್ಣ ಮತ್ತು ಕಾನ್ಸೆಬಲ್ ಲಕ್ಕಪ್ಪ ಅವರು ಉದ್ಯಮಿ ಲಕ್ಷ್ಮೀ ನಾರಾಯಣ್ ಅವರಿಂದ ಸಿಎಲ್-7 ಮತ್ತು ಮೈಕ್ರೋ ಬ್ರೇವರಿ ಲೈಸೆನ್ಸ್ ನೀಡಲು 2.30 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 2.25 ಕೋಟಿ ರೂ. ಗೆ ಒಪ್ಪಂದ ಮಾಡಿಕೊಂಡು, 25 ಲಕ್ಷ ರೂ. ಅಡ್ವಾನ್ಸ್ ಹಣ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.