ರಾಯಚೂರು: ನಗರದ ಚಾಲುಕ್ಯ ಅಕಾಡೆಮಿಯಿಂದ ಶಿಕ್ಷಕರ ಅರ್ಹತಾ ಪರೀಕ್ಷೆಗಾಗಿ 15 ದಿನ ಉಚಿತ ತರಬೇತಿ ಶಿಬಿರ
ನಗರದ ಚಾಲುಕ್ಯ ಅಕಾಡೆಮಿಯಿಂದ ಶಿಕ್ಷಕರ ಅರ್ಹತಾ ಪರೀಕ್ಷೆಗಾಗಿ 15 ದಿನ ಉಚಿತ ತರಬೇತಿ ಹಾಗೂ ಮಾದರಿ ಪರೀಕ್ಷೆ ಆಯೋಜನೆ ಮಾಡಲಾಗಿದೆ ಎಂದು ಚಾಲುಕ್ಯ ಕರಿಯರ್ ಅಕಾಡೆಮಿ ನಿರ್ದೇಶಕ ಸಂಗಮೇಶ ಮಂಗಾನವರ ಹೇಳಿದರು. ನವೆಂಬರ್ 16 ರಂದು ಮಧ್ಯಾಹ್ನ 3-00 ಗಂಟೆಗೆ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರಂತರ 18 ವರ್ಷಗಳಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಾ ಬಂದಿರುವ ಚಾಲುಕ್ಯ ಕರಿಯರ್ ಅಕಾಡೆಮಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ರಾಯಚೂರುನಿಂದ ಪ್ರಸ್ತುತ ಅಧಿಸೂಚನೆಯಾಗಿದೆ ಎಂದರು..