ಯೆಲಹಂಕ: ಸಾಕು ನಾಯಿಯನ್ನು ಕೊಲೆ ಮಾಡಿದ ಕೇರ್‌ಟೇಕರ್ ಬಂಧನ
ಸಾಕು ನಾಯಿಯನ್ನು ಅದರ ಕೇರ್‌ಟೇಕರ್ ಕೊಲೆ ಮಾಡಿದ ಘಟನೆ ಬೆಂಗಳೂರಿನ ಬಾಗಲೂರು ಠಾಣೆ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ನಾಯಿಯನ್ನು ಕೊಲೆಗೈದ ಪುಷ್ಪಲತಾ ಅವರನ್ನು ಸೋಮವಾರ ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾಯಿಯನ್ನು ವಾಕ್‌ಗೆಂದು ಕರೆದೊಯ್ದು, ಲಿಫ್ಟ್‌ನಲ್ಲಿ ನಾಯಿಯನ್ನು ಹತ್ಯೆ ಮಾಡಿದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ನಾಯಿ ಮಾಲೀಕರ ದೂರಿನನ್ವಯ ಪ್ರಿವೆನ್ಷನ್ ಆಫ್ ಕ್ರೂಯಲ್ಟಿ ಟು ಅನಿಮಲ್ಸ್ ಆಕ್ಟ್, 1960 ರ ಸೆಕ್ಷನ್ ಪ್ರಕಾರ ಪುಷ್ಪಲತಾ ಅವರನ್ನು ಬಂಧಿಸಲಾಗಿದೆ.