ಸದಾ ಒಂದಲ್ಲ ಒಂದು ಯಡವಟ್ಟಿಗೆ ಸುದ್ದಿಯಾಗುವ ವಿಮ್ಸ್ ಆಸ್ಪತ್ರೆ ಮತ್ತೊಮ್ಮೆ ಸುದ್ದಿಯಲ್ಲಿದೆ. ಬಳ್ಳಾರಿ ಸಾರ್ವಜನಿಕರಿಗೆ ಜೀವನಾಡಿಯಾಗಬೇಕಾದ ಈ ಆಸ್ಪತ್ರೆ ಒಳ್ಳೆಯ ಕಾರಣಗಳಿಗಿಂತ ಕೆಟ್ಟ ವಿಚಾರಗಳಿಗೆ ಸುದ್ದಿಯಲ್ಲಿರುತ್ತದೆ ಎಂದು ಬಳ್ಳಾರಿ ನಾಗರಿಕರು ಹೇಳುತ್ತಾರೆ. ವಿಮ್ಸ್ ಆಸ್ಪತ್ರೆಯ ಮುಖ್ಯ ಗೇಟ್ ಬಳಿ ನೆಲಕ್ಕೆ ಅಡ್ಡಲಾಗಿ ಹಾಕಿರುವ ಕಬ್ಬಿಣ ಪೈಪ್ ಗಳ ನಡುವೆ ಆಸ್ಪತ್ರೆಯಲ್ಲಿಯೇ ಕೆಲಸ ಮಾಡುವ ಲ್ಯಾಬ್ ಟೆಕ್ನಿಷಿಯನ್ ಒಬ್ಬರ ಕಾಲು ಸಿಲುಕಿಕೊಂಡು ಅವಸ್ಥೆಪಟ್ಟಿರುವ ಘಟನೆ ಬುಧವಾರ ಬೆಳಿಗ್ಗೆ 9:30 ನಡೆದಿದೆ. ಗಂಟೆಗಳ ಕಾಲ ಕಾಲು ಸಿಲುಕಿಕೊಂಡು ಒದ್ದಾಡಿದ ವ್ಯಕ್ತಿಯನ್ನು ಹೊರತೆಗೆಯಲು ಹರಸಾಹಸಪಡಲಾಯಿತು. ನಂತರ ಕಟಿಂಗ್ ಮೆಷಿನ್ ಬಳಸಿ ಪೈಪ್ಅನ್ನು ಕಟ್ ಮಾಡಿ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ಪಾರು ಮಾಡಲಾಯಿತು. ಗ