ಕೃಷ್ಣರಾಜನಗರ: ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಸಹಾಯಕ ಚುನಾವಣಾ ಅಧಿಕಾರಿ ಸುಪ್ರೀತಾ ಬಣಗಾರ್ ಸಭೆ, ಚುನಾವಣಾ ಕಾನೂನು, ಮತದಾನ ಜಾಗೃತಿ
ಪಟ್ಟಣ ತಾಲೂಕು ಕಚೇರಿಯಲ್ಲಿ ಚುನಾವಣಾ ಕಾನೂನು ಅರಿವು ಮತದಾನ ಜಾಗೃತಿ ಸಭೆಯನ್ನು ಪತ್ರಕರ್ತರೊಂದಿಗೆ ಸಹಾಯಕ ಚುನಾವಣಾ ಅಧಿಕಾರಿ ಸುಪ್ರೀತಾ ಬಣಗಾರ್ ಶುಕ್ರವಾರ ಎರಡು ಗಂಟೆಯಲ್ಲಿ ನಡೆಸಿದರು. ರಾಜ್ಯ ಚುನಾವಣಾ ಆಯೋಗದ ಕಾನೂನನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ಚುನಾವಣೆಗೆ ಸಹಕರಿಸೋಣ ಮತ್ತು ಶೇ. 100ರಷ್ಟು ಮತದಾನ ನಡೆಯುವಂತೆ ನಾವೆಲ್ಲರೂ ಮಂಡ್ಯ ಲೋಕಸಭಾ ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡೋಣ ಎಂದರು. ಚೆಕ್‌ಪೋಸ್ಟ್‌ಗಳಲ್ಲಿ ನಿತ್ಯ ನಡೆಯುವ ಮಾಹಿತಿ, ಚುನಾವಣೆ ಸಿಬ್ಬಂದಿ ದಿನನಿತ್ಯದ ಕಾರ್ಯ ಚಟುವಟಿಕೆ ವಿಶೇಷ ಸಭೆಗಳ ಬಗ್ಗೆ ಪತ್ರಕರ್ತರಿಗೆ ಮಾಹಿತಿ ನೀಡುತ್ತೇವೆ ಎಂದರು.