ಕೊಪ್ಪಳ: ಸ್ವಚ್ಛತೆ ಕಾಣದ ಜಿಲ್ಲಾ ಆಸ್ಪತ್ರೆ ಆವರಣ
Koppal, Koppal | Apr 23, 2025 ಕೊಪ್ಪಳ ನಗರದ ಜಿಲ್ಲಾ ಆಡಳಿತ ಭವನದ ಬಳಿ ಇರುವ ಜಿಲ್ಲಾ ಆಸ್ಪತ್ರೆ ಆವರಣ ಸ್ವಚ್ಛತೆ ಮಾಯವಾಗಿದೆ. ಸಾಮಾಜಿಕ ಕಾರ್ಯಕರ್ತ ಫಕೀರಪ್ಪ ಮಳ್ಳಿಕೇರಿ ರವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಏಪ್ರಿಲ್ 23ರಂದು ಬುಧವಾರ ರಾತ್ರಿ ಬೇಸರ ಹೊರಹಾಕಿದ್ದಾರೆ. ಇನ್ನು ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳಿಗೆ ವೀಲ್ ಚೇರ್ ಕೂಡ ಸಿಗದೇ ರೋಗಿಗಳು ಪರದಾಡುವ ಸ್ಥಿತಿ ವ್ಯಕ್ತವಾಗಿದೆ.