ಬಳ್ಳಾರಿ: ನಕಲಿ ದಾಖಲೆಗಳ ಮೂಲಕ ಉದ್ಯಾನವನ ಕಬಳಿಸಲು ಪ್ರಯತ್ನ;ನಗರದಲ್ಲಿ
ವೀರನಗೌಡ ಕಾಲೋನಿಯ ಸಾರ್ವಜನಿಕರಿಂದ ಗಂಭೀರ ಆರೋಪ
ನಗರದ ವೀರನಗೌಡ ಕಾಲೋನಿಯಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಟ್ಟಿದ್ದ ಉದ್ಯಾನವನದ ಜಾಗವನ್ನು ಕಬಳಿಸಲು ಕೆಲವು ವ್ಯಕ್ತಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಂಗಕ್ಕೆ ಸಲ್ಲಿಸಿರುವುದಾಗಿ ಸ್ಥಳೀಯ ನಿವಾಸಿಗಳು ಗಂಭೀರವಾದ ಆರೋಪ ಮಾಡಿದ್ದಾರೆ. ನಗರದ ವೀರನ ಗೌಡ ಉದ್ಯಾನವನದಲ್ಲಿ ವೀರನಗೌಡ ಕಾಲೋನಿ ಮತ್ತು ಗಣೇಶ ನಗರ ನಾಗರೀಕ ಸೇವಾ ಸಂಘದ ವತಿಯಿಂದಮಂಗಳವಾರ ಬೆಳಿಗ್ಗೆ 11ಗಂಟೆಗೆ ಪತ್ರಿಕಾಗೋಷ್ಠಿ ನಡಿಸಿ ಮಾತನಾಡಿದಸ್ಥಳಿಯರು ವಾರ್ಡ್ ನಂ. 35ರ ಟಿಎಸ್ ನಂ. 350/133ರಲ್ಲಿ 1971–72ರಲ್ಲಿ ಬಡಾವಣೆ ನಿರ್ಮಾಣಗೊಂಡಾಗ, ಒಟ್ಟು ಪ್ರದೇಶದ 0.80% ಸೆಂಟ್ಸ್ ಅನ್ನು ಸಾರ್ವಜನಿಕ ಉದ್ಯಾನವನಕ್ಕಾಗಿ ಮೀಸಲಿಡಲಾಗಿತ್ತು. ಅದಾಗಿಯಿಂದ ಇಂದಿ