ಕೃಷ್ಣರಾಜನಗರ: ಕೃಷ್ಣರಾಜನಗರ ಪಟ್ಟಣದ ಮುಸ್ಲಿಂ ಮುಖಂಡರಿಂದ ಸಡಗರ ಸಂಭ್ರಮದಿಂದ ರಂಜಾನ್ ಹಬ್ಬವನ್ನು ಗುರುವಾರ ಆಚರಿಸಲಾಯಿತು.
ಕೃಷ್ಣರಾಜನಗರ ಪಟ್ಟಣದ ಮುಸ್ಲಿಮರು ಸಡಗರ ಸಂಭ್ರಮದಿಂದ ರಂಜಾನ್ ಹಬ್ಬವನ್ನು ಗುರುವಾರ ಜಾಮಿಯಾ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಿದರು. ದ್ವೇಷ ವೈಮನಸುಗಳನ್ನು ಮರೆತು ಪ್ರೀತಿ-ಸ್ನೇಹಗಳನ್ನು ಬೆಸೆಯುವ ಪವಿತ್ರ ಹಬ್ಬ ರಂಜಾನ್ ಹಬ್ಬವಾಗಿದ್ದು, ಪಕ್ಷಗಳನ್ನು ಮರೆತು ಒಗ್ಗಟ್ಟಿನಿಂದ ಮುಖಂಡರು ಜಾಮಿಯ ಮಸೀದಿ ಗುರುಗಳ ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸಿದರು.