ಕಾಗಿನೆಲೆ ಕನಕಗುರು ಪೀಠದ ತಿಂಥಣಿ ಬ್ರಿಜ್ ಶಾಖಾ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಸಿದ್ದರಾಮನಂದಪುರಿ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಜೇವರ್ಗಿ ತಾಲೂಕಿನ ಕುರುಬ ಸಮಾಜದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪಟ್ಟಣದ ಹಳೆಯ ತಹಸೀಲ್ದಾರ್ ಕಚೇರಿ ಆವರಣದಲ್ಲಿರುವ ಸಂಗೊಳ್ಳಿ ರಾಯಣ್ಣನ ಮೂರ್ತಿ ಬಳಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಎರಡು ನಿಮಿಷಗಳ ಮೌನಾಚರಣೆ ನಡೆಸಲಾಯಿತು. ಈ ವೇಳೆ ರಾಜಶೇಖರ್ ಮುತ್ತಕೊಡ ಮಾತನಾಡಿ ಶ್ರೀಗಳ ಕಾರ್ಯವೈಕರಿ ಸ್ಮರಿಸಿದರು. ಈ ಸಂದರ್ಭದಲ್ಲಿ ಸಾಯ್ಬಣ್ಣ ದೊಡ್ಮನಿ, ನಿಂಗಣ್ಣ ಭಂಡಾರಿ, ಚಂದ್ರಶೇಖರ್ ನೀರಡಗಿ, ನಿಂಗಣ್ಣ ರದ್ದೆವಾಡಗಿ ಸೇರಿದಂತೆ ಸಮಾಜದ ಯುವಕರು ಹಿರಿಯರು ಪಾಲ್ಗೊಂಡಿದ್ದರು ಎಂದು ಗುರುವಾರ 4 ಗಂಟೆಗೆ ಮಾಹಿತಿ ಲಭ್ಯವಾಗಿದೆ...