ಲೋಕಸಭಾ ಚುನಾವಣೆಯಲ್ಲಿ ಸಾಲಿಗ್ರಾಮ ತಾಲ್ಲೂಕಿನಿಂದ ಶೇ 100ರಷ್ಟು ಮತದಾನವಾಗುವಂತೆ ನೋಡಿಕೊಳ್ಳಬೇಕೆಂದು ತಾಪಂ ಇಒ ಶಿವಕುಮಾರಿ ಮನವಿ ಮಾಡಿದರು. ಸೋಮವಾರದಂದು ಪಟ್ಟಣದ ಮಹಾವೀರ ರಸ್ತೆಯಲ್ಲಿ ಆಶಾ ಕಾರ್ಯಕರ್ತೆಯರೊಂದಿಗೆ ಮತದಾನದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಪಿಡಿಒ ತಿಲಕ್ ರಾಜ್ ಸೇರಿದಂತೆ ಹಲವರು ಇದ್ದರು.