ಕಲಬುರಗಿ: ವಿದ್ಯುತ್ ಕಡಿತ, ಜೆಸ್ಕಾಂ ಸಿಬ್ಬಂದಿ ಮನೆಗೆ ನುಗ್ಗಿ ಹಲ್ಲೆ ಆರೋಪ, ವಿಡಿಯೋ ವೈರಲ್: ದರ್ಗಾಶಿರೂರನಲ್ಲಿ ಘಟನೆ
ವಿದ್ಯುತ್ ಕಡಿತವಾದ ಹಿನ್ನೆಲೆ ಜೆಸ್ಕಾಂ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ದರ್ಗಾ ಶಿರೂರ ಗ್ರಾಮದ ಜೆಸ್ಕಾಂ ಸಹಾಯಕ ಪವರ್‌ಮ್ಯಾನ್ ಯಶವಂತರಾವ್ ಘಂಟೆ ಮೇಲೆ ಹಲ್ಲೆ ನಡೆಸಿರುವ ದೃಶ್ಯಾವಳಿಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯಶವಂತರಾವ್ ಅವರು ಜೆಸ್ಕಾಂನ ಜಿಡಗಾ ಶಾಖಾ ವ್ಯಾಪ್ತಿಯ ಗ್ರಾಮಗಳಲ್ಲಿ ಸಹಾಯಕ ಪವರ್‌ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾತ್ರಿ ವೇಳೆ ವಿದ್ಯುತ್ ಕಡಿತವಾದಾಗ ಸಮಸ್ಯೆಯ ಕುರಿತು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಅವರ ಸೂಚನೆಯಂತೆ ಮನೆಗೆ ತೆರಳಿದ್ದರು. ಆದರೆ ಮಾರಣೆ ದಿನ ಬೆಳಗ್ಗೆ ಮೊಘಾ (ಬಿ) ಗ್ರಾಮದ ಕಾಶಿನಾಥ್ ಮೂಲ್ಗೆ, ದತ್ತು ಪೂಜಾರಿ ಹಾಗೂ ಇತರೆ ಮೂವರು ಸೇರಿ ಯಶವಂತರಾವ್ ಅವರ ಮನೆಗೆ ಬಂದು,