ಜನವರಿ 11ರಂದು ಶಿವಶರಣ ಮಾದರ ಚೆನ್ನಯ್ಯನವರ ಜಯಂತೋತ್ಸವ ಹಾಗೂ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲು ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಜೇವರ್ಗಿ ಪ್ರವಾಸಿ ಮಂದಿರದಲ್ಲಿ ನಡೆದ ಮಾದಿಗ ಸಮುದಾಯದ ವತಿಯಿಂದ ಪೂರ್ವಭಾವಿ ಸಭೆಯ ನಂತರ ತಾಲೂಕ ಅಧ್ಯಕ್ಷ ನಾಗರಾಜ ಆಲ್ಗೂರು ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ಸಚಿವ ಮುನಿಯಪ್ಪ ಸೇರಿದಂತೆ ಆರ್‌ಬಿ ತಿಮ್ಮಾಪುರ, ಆಂಜನೇಯಪ್ಪ, ಚಂದ್ರಪ್ಪ ಹಾಗೂ ಸಮಾಜದ ಹಿರಿಯರು, ಗುರುಗಳು ಮತ್ತು ರಾಜಕೀಯ ಗಣ್ಯರು ಆಗಮಿಸಲಿದ್ದಾರೆ ಎಂದು ಸಭೆಯ ಬಳಿಕ ಮಾತನಾಡಿದ ನಾಗರಾಜ ಆಲ್ಗೂರು ತಿಳಿಸಿದ್ದಾರೆ. ಈ ಕುರಿತು ಶುಕ್ರವಾರ 7 ಗಂಟೆಗೆ ಮಾಹಿತಿ ಲಭ್ಯವಾಗಿದೆ..