ಬಳ್ಳಾರಿ: ಬೇಸಿಗೆ ಬೆಳೆಗೆ ನೀರು ಬಿಡದಿರುವ ಸರ್ಕಾರದ ನಿರ್ಧಾರಕ್ಕೆ; ಜಿಲ್ಲೆಯ ರೈತರ ಅಸಮಾಧಾನ
ರಾಜ್ಯ ಸರ್ಕಾರವು ತುಂಗಭದ್ರ ಜಲಾಶಯದಿಂದ ಬೇಸಿಗೆ ಬೆಳೆಗೆ ನೀರು ಬಿಡಲು ಆಗುವುದಿಲ್ಲ ಎಂದು ಹೇಳಿರುವುದು ಜಿಲ್ಲೆಯ ರೈತರಲ್ಲಿ ತೀವ್ರ ಬೇಸರ, ಅಸಮಾಧಾನ ಮೂಡಿಸಿದೆ. ಬೆಂಗಳೂರಿನಲ್ಲಿ ಶುಕ್ರವಾರ ನಡೆದ ತುಂಗಭದ್ರ ಐಸಿಸಿ ಸಭೆಯಲ್ಲಿ, ರಾಜ್ಯದ ಜಲಸಂಪನ್ಮೂಲ ಖಾತೆಯ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಸಚಿವ ಶಿವರಾಜ್ ತಂಗಡಗಿ ಮತ್ತು ನಾಲ್ಕು ಜಿಲ್ಲೆಗಳ ಶಾಸಕರು, ರೈತ ಪ್ರತಿನಿಧಿಗಳ ಸಭೆಯಲ್ಲಿ `ಬೇಸಿಗೆ ಬೆಳೆ’ಗೆ ನೀರು ಹಾಯಿಸಲು ಸಾಧ್ಯವಿಲ್ಲ. ಕ್ರಸ್ಟ್ಗೇಟ್ಗಳ ಅಳವಡಿಕೆ ಕಾರಣ ಬೇಸಿಗೆ ಬೆಳೆಗೆ ನೀರು ಬಿಡಲಾಗುವುದಿಲ್ಲ ಎಂದು ಸರ್ಕಾರ ಹೇಳಿದೆ. ಏತನ್ಮಧ್ಯೆ, ಕರ್ನಾಟಕ ರಾಜ್ಯ ರೈತ ಸಂಘ - ಹಸಿರು ಸೇನೆಯ ನೇತೃತ್ವದಲ್ಲಿ ಬೇಸಿಗೆ ಬೆಳೆಗೆ ನೀರು ಹಾಯಿಸಲು ಆಗ್ರಹಿಸಿ, ಟಿ.ಬಿ.