ನಗರದಲ್ಲಿ ಯುವಕನ ಪ್ರೀತಿಯ ಬಲೆಗೆ ಬಿದ್ದಿರುವ 35 ವರ್ಷ ವಯಸ್ಸಿನ ಒಂದು ಮಗುವಿನ ತಾಯಿ ನಾಪತ್ತೆಯಾಗಿದ್ದಾಳೆಂಬ ಘಟನೆ ವರದಿಯಾಗಿದೆ. ಸೀರೆ ಖರೀದಿಸಲು ಮಾರುಕಟ್ಟೆಗೆ ಹೋಗುತ್ತಿದ್ದೇನೆ ಎಂದು ಹೇಳಿ ಮನೆಯಿಂದ ಹೊರಟ ಮಹಿಳೆ ಮನೆಗೆ ಮರಳಿಲ್ಲ ಎಂದು ಆಕೆಯ ಮಾವ ಧನಂಜಯ ಕುಲಕರ್ಣಿ ಅವರು ಆರ್.ಜಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 14 ವರ್ಷಗಳ ಹಿಂದೆ ವಿವಾಹವಾಗಿದ್ದ ಮಹಿಳೆಗೆ ಓರ್ವ ಪುತ್ರಿ ಇದ್ದಾಳೆ. ಹೀಗಿರುವಾಗ ಮಹಿಳೆ ನಾಪತ್ತೆಯಾಗಿದ್ದಾಳಂತೆ, ಮನೆಯೊಳಗೆ ಒಂದು ಪತ್ರ ದೊರೆತಿದ್ದು, ಅದರಲ್ಲಿ ತಾನು ಒಬ್ಬ ಯುವಕನನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ಹೋಗುತ್ತಿದ್ದೇನೆ. ಈ ವಿಷಯಕ್ಕೂ ತನ್ನ ತಂದೆ-ತಾಯಿಗೆ ಯಾವುದೇ ಸಂಬಂಧವಿಲ್ಲ ಎಂದು ಮಹಿಳೆ ಬರೆದಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿ