ಬೆಂಗಳೂರಿನ ಕೆ.ಆರ್. ಪುರಂ ಕ್ಷೇತ್ರದ ಎ. ನಾರಾಯಣಪುರ ವಾರ್ಡ್ನಲ್ಲಿ ರಸ್ತೆ ಸರಿಪಡಿಸಿ, ಚರಂಡಿ ನೀರು ತೆರವುಗೊಳಿಸುವಂತೆ ಆಗ್ರಹಿಸಿ ಕೆ.ಆರ್.ಎಸ್. ಪಾರ್ಟಿ ಕಾರ್ಯಕರ್ತರು ಕೆಸರು ನೀರಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಎರಡೂರು ವರ್ಷಗಳಿಂದ ರಸ್ತೆಯಲ್ಲಿ ಹರಿಯುತ್ತಿದ್ದ ಕೆಸರು ನೀರಿಗೆ ಇದೀಗ ಪರಿಹಾರ ಸಿಕ್ಕಿದೆ.