ಚಿಕ್ಕಬಳ್ಳಾಪುರ: ವಿಶೇಷಚೇತನರಿಗೆ ಸಾಧನ ಸಲಕರಣೆಗಳ ಮೌಲ್ಯಮಾಪನ ತಪಾಸಣೆ ಶಿಬಿರ: ಜಿಲ್ಲಾ ವಿಶೇಷಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಪ್ರಕಟಣೆ
ಕೇಂದ್ರ ಸರ್ಕಾರದ ಅಡಿಪ್ ಯೋಜನೆಯಡಿ ಅಲಿಂಕೋ ಸಂಸ್ಥೆಯವರು ಚಿಕ್ಕಬಳ್ಳಾಪುರ ಜಿಲ್ಲೆಯ ಅಗತ್ಯವಿರುವ ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಗಳನ್ನು ವಿತರಿಸಲು ಮೌಲ್ಯಮಾಪನ ತಪಾಸಣಾ ಶಿಬಿರವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣ ಅಧಿಕಾರಿ ಇಂದು ಮಂಗಳವಾರ ಸಂಜೆ 4:00 ಯಲ್ಲಿ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜು5 ರಂದು ಚಿಕ್ಕಬಳ್ಳಾಪುರ ಎಂಟರಂದು ಶಿಡ್ಲಘಟ್ಟ, 9 ರಂದು ಚಿಂತಾಮಣಿ 10 ರಂದು ಗುಡಿಬಂಡೆ 11ರಂದು ಗೌರಿಬಿದನೂರು 12 ರಂದು ಬಾಗೇಪಲ್ಲಿಯಲ್ಲಿ ಆಯೋಜಿಸಿದೆ ಹೆಚ್ಚಿನ ವಿವರಕ್ಕೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಜಿಲ್ಲಾಡಳಿತ ಭವನ ಇಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.