ಕುಕನೂರ: ಬೆಣಕಲ್ ಗ್ರಾಮದ ಹನಮೇಶ ಬಜೇಂತ್ರಿಯ ಪತ್ನಿ ಲಕ್ಷ್ಮವ್ವ (30) ಹಾಗೂ ಮಕ್ಕಳಾದ  ಜಾನವಿ(1) ರಮೇಶ(3)ನೇಣು ಬೀಗಿದ  ಸ್ಥಿತಿಯಲ್ಲಿ ಶವ ಪತ್ತೆ
ಕೊಪ್ಪಳ. ಜಿಲ್ಲೆಯ ಕುಕನೂರು  ತಾಲೂಕಿನ ಬೆಣಕಲ್ ಗ್ರಾಮದ ಹನಮೇಶ ಬಜೇಂತ್ರಿ ಎನ್ನುವವರ ಪತ್ನಿ ಲಕ್ಷ್ಮವ್ವ (30) ಹಾಗೂ ಮಕ್ಕಳಾದ  ಜಾನವಿ(1) ರಮೇಶ (3) ಇವರು ಸೋಮವಾರ ಮಧ್ಯಾಹ್ನ 2-00 ಗಂಟೆಗೆ ಅವರ ಮನೆಯಲ್ಲಿ ನೇಣು ಬೀಗಿದ ಸ್ಥಿತಿಯಲ್ಲಿ ಮೃತ ದೇಹಗಳು ಪತ್ತೆಯಾಗಿವೆ.   ಈ ಘಟನೆಯ ಕುರಿತಂತೆ ಕುಕನೂರು ಪೋಲಿಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.  ವಿಷಯ ತಿಳಿದ  ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ದಿ, ಡಿವಾಯ್ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.