ನಂಜನಗೂಡು: ಕಾಂಗ್ರೆಸ್, ಬಿಜೆಪಿ ಹಣ ಬಲದ ಮೇಲೆ ಚುನಾವಣೆಯನ್ನು ಎದುರಿಸುತ್ತಿವೆ; ನಗರದಲ್ಲಿ ಬಿಎಸ್ಪಿ ಅಭ್ಯರ್ಥಿ ಕೃಷ್ಣಮೂರ್ತಿ ಹೇಳಿಕೆ
ನಂಜನಗೂಡು; ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಹಣ ಬಲದ ಮೇಲೆ ಚುನಾವಣೆಯನ್ನು ಎದುರಿಸುತ್ತಿವೆ ಎಂದು ಬಹು ಜನ ಸಮಾಜ ಪಕ್ಷದ ಅಭ್ಯರ್ಥಿ ಕೃಷ್ಣಮೂರ್ತಿ ಹೇಳಿದರು. ನಂಜನಗೂಡು ನಗರದ ಬಿಎಸ್ಪಿ ಕಛೇರಿಯಲ್ಲಿ ಮಾತನಾಡಿದ ಅವರು, ಅನಿರೀಕ್ಷಿತವಾಗಿ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೇನೆ. ನಿವೃತ್ತ ತಹಶೀಲ್ದಾರ್ ಮಹದೇವಯ್ಯ ಎಂಬುವರನ್ನು ನಾವು ಆಯ್ಕೆ ಮಾಡಿದ್ದೇವು ಆದರೆ ಅವರು ಕಾರಣಾಂತರಗಳಿಂದ ನಾಮ ಪತ್ರವನ್ನು ಸಲ್ಲಿಕೆ ಮಾಡಲಿಲ್ಲ. ಹಾಗಾಗಿ ಪಕ್ಷದ ಆದೇಶದ ಮೇರೆಗೆ ನಾನು ನಾಮಪತ್ರವನ್ನು ಸಲ್ಲಿಕೆ ಮಾಡಿದ್ದೇನೆ ಎಂದು ಹೇಳಿದರು.