ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ 4.5 ಕೆಜಿ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮಂಗಳವಾರ ಬೆಂಗಳೂರು, ಬಳ್ಳಾರಿ ಮತ್ತು ತಿರುವನಂತಪುರದಲ್ಲಿ ದಾಳಿ ನಡೆಸಿದ್ದಾರೆ. ಶ್ರೀರಾಮಪುರ ಅಯ್ಯಪ್ಪ ದೇವಸ್ಥಾನ ಮತ್ತು ಟ್ರಸ್ಟಿ ನಿವಾಸದಲ್ಲೂ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಬಳ್ಳಾರಿಯ ರೊದ್ದಂ ಜುವೆಲರಿ ಅಂಗಡಿಯ ಮೇಲೂ ದಾಳಿ ಮಾಡಲಾಗಿದ್ದು, ಚಿನ್ನ ಖರೀದಿ ಆರೋಪದಡಿ ಅಂಗಡಿ ಮಾಲೀಕ ಗೋವರ್ಧನ್ ಈಗಾಗಲೇ ಬಂಧಿತನಾಗಿದ್ದಾನೆ. ಆರೋಪಿ ಉನ್ನಿಕೃಷ್ಣನ್ನಿಂದ ಗೋವರ್ಧನ್ ಚಿನ್ನ ಖರೀದಿಸಿದ್ದ ಎನ್ನಲಾಗಿದೆ.