ಮೈಸೂರು: ದಸರಾ ಪಾಸ್ ಗಾಗಿ ಶಾಸಕರ ಕಚೇರಿಗೆ ಮುಗಿಬಿದ್ದ ಜನ
Mysuru, Mysuru | Oct 1, 2025 ನಾಡಹಬ್ಬ ದಸರಾ ಮಹೋತ್ಸವದ ಪಾಸ್ ಗಾಗಿ ಶಾಸಕರ ಕಚೇರಿಯಲ್ಲಿ ಜನಜಂಗುಳಿ ನಿರ್ಮಾಣವಾದ ಘಟನೆ ನಡೆದಿದೆ. ದಸರಾ ಪಾಸ್ ಗಳನ್ನು ತಮ್ಮ ಕ್ಷೇತ್ರ ವ್ಯಾಪ್ತಿಯ ಜನರಿಗೆ ಹಂಚುತ್ತಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಜಲದರ್ಶಿನಿ ಅತಿಥಿ ಗೃಹದಲ್ಲಿರುವ ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಕಚೇರಿಗೆ ಲಗ್ಗೆ ಹಾಕಿದ ನೂರಾರು ಮಂದಿ ಪಾಸ್ ಗಾಗಿ ಶಾಸಕರನ್ನು ಮುಗಿಬಿದ್ದರು. ಜನರನ್ನು ನಿಯಂತ್ರಿಸುದೇ ಶಾಸಕರಿಗೆ ದುಸ್ಸಾಹಸವಾಯಿತು. ಜನಜಂಗುಳಿ ತಪ್ಪಿಸಿಕೊಂಡು ಶಾಸಕರು ಅಲ್ಲಿಂದ ನಿರ್ಗಮಿಸಲಿ ಹರಸಾಹಸ ನಡೆಸಬೇಕಾಯಿತು.