ಯಲಬರ್ಗ: ಲಿಂಗನಬಂಡಿ ಮೌನೇಶ್ವರ ದೇವಸ್ಥಾನಕ್ಕೆ ದಿನನಿತ್ಯ ಪೂಜೆಗೆ ಅವಕಾಶ ಕಲ್ಪಿಸಿ ತಿಮ್ಮರಗುದ್ದಿಯಲ್ಲಿ ಡಿಸಿಗೆ ಜಿಲ್ಲಾಧ್ಯಕ್ಷ ನಾಗೇಶ್ ಮನವಿ
ಏಪ್ರಿಲ್ 24ರಂದು ಗುರುವಾರ ಸಂಜೆ, ತಿಮ್ಮರಗುದ್ದಿ ಗ್ರಾಮದಲ್ಲಿ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ನಾಗೇಶ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಲಿಂಗನ ಬಂಡಿ ಗ್ರಾಮದಲ್ಲಿರುವ ಜಗದ್ಗುರು ಮೌನೇಶ್ವರ ದೇವಸ್ಥಾನಕ್ಕೆ ದಿನ ನಿತ್ಯ ಪೂಜೆಗೆ ಕೊಪ್ಪಳ ಜಿಲ್ಲಾಧಿಕಾರಿಗಳಾದ ನಲಿನತುಲ್ ರವರು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಸಮಾಜದ ಮುಖಂಡರು ಉಪಸ್ಥಿತರಿದ್ದರು.