ಕಲಬುರಗಿ: 5 ವರ್ಷದ ಹಿಂದೆ ಮದುವೆ, 1 ವರ್ಷದ ಹಿಂದೆ ನಾಪತ್ತೆ: ಈಗ ಧಿಡೀರ್ ಕರೆ ಮಾಡಿ ವಾಪಸ್ ಬರಲ್ಲ ಎಂದ ಮಹಿಳೆ, ಎಂಬಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು
ಕಲಬುರಗಿಯಲ್ಲಿ ವಿವಾಹಿತ ಮಹಿಳೆ ನಾಪತ್ತೆಯಾಗಿ ಸುಮಾರು ಒಂದು ವರ್ಷದ ಬಳಿಕ ತಾನಾಗಿಯೇ ಮೊಬೈಲ್ ಕರೆ ಮಾಡಿ ವಾಪಸ್ ಬರುವುದಿಲ್ಲ ಎಂದು ತಿಳಿಸಿರುವ ಘಟನೆ ಎಂಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ಬಸವೇಶ್ವರ ಕಾಲೋನಿ ನಿವಾಸಿ 29 ವರ್ಷದ ಮಮತಾ ನಾಪತ್ತೆಯಾಗಿದ್ದಾರೆ ಎಂದು ಆಕೆಯ ಪತಿ, ಹರಕಂಚಿ ಗ್ರಾಮದ ನಿವಾಸಿ ಸಿದ್ದಣ್ಣ ಕಂಠಿಕರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಐದು ವರ್ಷಗಳ ಹಿಂದೆ ಅಕ್ಕನ ಮಗಳಾ್ ಮಮತಾ ಅವರೊಂದಿಗೆ ವಿವಾಹವಾಗಿದ್ದು, ದಂಪತಿಗೆ ಒಂದು ಗಂಡು ಮಗು ಇದೆ. ಕಳೆದ ವರ್ಷ ತವರು ಮನೆಗೆ ಹೋಗುವುದಾಗಿ ಹೇಳಿ ಕಲಬುರಗಿಗೆ ಬಂದಿದ್ದ ಮಮತಾ ಬಳಿಕ ನಾಪತ್ತೆಯಾಗಿದ್ದರು. ಸಂಬಂಧಿಕರು ಹಾಗೂ ಪರಿಚಿತರ ಬಳಿ ಎಲ್ಲೆಲ್ಲೂ ಹುಡುಕಿದರೂ ಪತ್ತೆಯಾಗಿರಲಿಲ್ಲ. ಇದೀಗ ಸುಮ