ಜಗಳೂರು ತಾಲ್ಲೂಕಿನ ಕೊಡದಗುಡ್ಡ ವೀರಭದ್ರೇಶ್ವರ ಸ್ವಾಮಿಯ ಕರಿಗಲ್ಲು ಸ್ಥಾಪನೆ ಹಿನ್ನೆಲೆ ಕೊಡಗು ಗುಡ್ಡ ವೀರಭದ್ರೇಶ್ವರ ಸ್ವಾಮಿಯ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯನ್ನು ಕಣ್ವ ಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಭಾನುವಾರ ನಡೆಸಲಾಯಿತು. ಈ ವೇಳೆ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಅವರು ಕೊಡತಗುಡ್ಡ ವೀರಭದ್ರೇಶ್ವರ ದೇಗುಲ ಆವರಣದಲ್ಲಿ ಮಾರ್ಚ್ 14 ರಂದು ಬುಧವಾರ ವಸತಿಗೃಹ ಉದ್ಘಾಟನೆ, ಕರ್ಗಲ್ಲು ಕರಿಕಲ್ಲು ಸ್ಥಾಪನೆ ಕಲ್ಯಾಣ ಮಂಟಪ ಶಂಕುಸ್ಥಾಪನೆ. ಅಡಪಲ್ಲಕ್ಕಿ ಮಹೋತ್ಸವ ಹಾಗೂ ಧಾರ್ಮಿಕ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.