ಚಿಂತಾಮಣಿ: ಟವರ್ ಕಾಮಗಾರಿ ಹಿನ್ನಲೆ ಜುಲೈ 8ರಂದು ಮಸ್ತೇನಹಳ್ಳಿ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯ
ಬೆ.ವಿ.ಕಂ, ಗ್ರಾಮೀಣ ಉಪ ವಿಭಾಗ, ಚಿಂತಾಮಣಿಯ 66 ಕೆ.ವಿ. ಕೆ.ಐ.ಎ.ಡಿ.ಬಿ ಮಸ್ತೇನಹಳ್ಳಿ ಮಾರ್ಗದ ಟವರ್ ಕಾಮಗಾರಿಯನ್ನು ಜುಲೈ 8 ರಂದು ಬೃಹತ್ ಕಾಮಗಾರಿ ವಿಭಾಗ, ಕ.ವಿ.ಪ್ರ.ನಿ.ನಿ ಕೋಲಾರ ರವರು ಹಮ್ಮಿಕೊಂಡಿದ್ದು,ನಾಳೆ (ಜು 8) ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ನಿಂದ ಇಂದು ಭಾನುವಾರ ಮಧ್ಯಾಹ್ನ 2 ಗಂಟೆಯಲ್ಲಿ ಲಭ್ಯವಾದ ಪ್ರಕಟಣೆಯಲ್ಲಿ ತಿಳಿಸಿದೆ ತಳಗವಾರ ಉಪಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಚೆನ್ನಕೇಶವಪುರ,11KVಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ