ಕಲಬುರಗಿ : ಕಲಬುರಗಿ ಜಿಲ್ಲೆ ಆಳಂದ ಪಟ್ಟಣದಲ್ಲಿ ಮಾಸ್ಟರ್ ಪ್ಲ್ಯಾನ್ ನೆಪದಲ್ಲಿ ಐದಾರು ದಶಕಗಳಿಂದ ವಾಸಿಸುತ್ತಿರೋ ನೂರಾರು ಮನೆಗಳು ಮತ್ತು ಅಂಗಡಿ ಮುಂಗಟ್ಟುಗಳನ್ನ ತೆರವು ಮಾಡುತ್ತಿದ್ದು, ಯಾವುದೇ ಪರಿಹಾರ ನೀಡದೇ ತೆರವು ಕಾರ್ಯಾಚರಣೆ ಮಾಡ್ತಿರೋದನ್ನ ಖಂಡಿಸಿ, ಆಳಂದ ಪಟ್ಟಣದಲ್ಲಿ ಡಿಸೆಂಬರ್ 31 ರಂದು ಮಧ್ಯಾನ 1 ಗಂಟೆಗೆ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.. ಪಟ್ಟಣದ ಹಳೆ ತಹಶಿಲ್ದಾರ್ ಕಚೇರಿ ಮುಂಭಾಗದಲ್ಲಿ ಬಿಜೆಪಿ ಮುಖಂಡ ಹರ್ಷಾನಂದ ಗುತ್ತೇದಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗ್ತಿದೆ.. ಪರಿಹಾರ ಕೊಟ್ಟು ಮತ್ತು ಬೇರೆಡೆ ಸೂರು ಕಲ್ಪಿಸಿ ಡೆಮೋಲಿಷನ್ ಕಾರ್ಯ ಮಾಡಿ ಅಂತಾ ಆಗ್ರಹಿಸಿದ್ದಾರೆ