ಕೊಪ್ಪಳ: ಬ್ರಾಹ್ಮಣ ಸಮಾಜವನ್ನು ಹಗುರವಾಗಿ ಕಡೆಗಣಿಸಬಾರದು: ನಗರದಲ್ಲಿ ಸಮಾಜದ ಮುಖಂಡ ವೇಣುಗೋಪಾಲ್ ಆಕ್ರೋಶ
Koppal, Koppal | Apr 22, 2025 ಏಪ್ರಲ್ 22 ಮಂಗಳವಾರ ಮಧ್ಯಾಹ್ನ ಕೊಪ್ಪಳ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ವೇಣುಗೋಪಾಲ್ ಜಾಗೀರ್ದಾರ್ ಮಾತನಾಡಿ ಸಮಾಜದ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯುವಾಗ ಜನಿವಾರ ತೆಗೆದು ಪರೀಕ್ಷೆ ಬರೆಯಲು ಸೂಚಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರ ಬ್ರಾಹ್ಮಣ ಸಮಾಜವನ್ನು ಹಗುರವಾಗಿ ಕಡೆಗಣಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.