ಪಟ್ಟಣದಲ್ಲಿ ಪುರಸಭೆ ವತಿಯಿಂದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ ಮಂಗಳವಾರ ನಡೆದಿದ್ದು, ಕಾರ್ಯಕ್ರಮಕ್ಕೆ ಪುರಸಭೆ ಮುಖ್ಯಾಧಿಕಾರಿ ಹೇಮಂತ್ ಕುಮಾರ್ ಡೊಳ್ಳೆ ಚಾಲನೆ ನೀಡಿದರು. ಪಟ್ಟಣದ ಚಂದ್ರ ಮೌಳ್ಯ ರಸ್ತೆ, ಆಂಜನೇಯ ಬ್ಲಾಕ್ ಬಜಾರ್ ರಸ್ತೆ, ವಿವಿ ರಸ್ತೆ, ಗರಡಗಂಭ ವೃತ್ತ, ಹಾಸನ-ಮೈಸೂರು ರಾಜ್ಯ ಹೆದ್ದಾರಿ ಸೇರಿ ವಿವಿಧ ರಸ್ತೆಗಳಲ್ಲಿ ಮತದಾನ ಜಾಗೃತಿ ಜಾಥಾ ನಡೆಸಿದರು.