ಹೊಳಲ್ಕೆರೆ ಪಟ್ಟಣದ ಪತ್ರಕರ್ತರ ಭವನದಲ್ಲಿ ನಟ ಚೇತನ್ ಅಹಿಂಸಾ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಶನಿವಾರ ಸಂಜೆ 4 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿದ ಚಿತ್ರನಟ ಹಾಗೂ ಸಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ಮಾತನಾಡಿದ್ದು ಚಿತ್ರದುರ್ಗ ಜಿಲ್ಲೆಯಲ್ಲಿರುವ ಗಣಿ ಬಾದಿತ ಪ್ರದೇಶದ ಸಮಸ್ಯೆಗಳನ್ನು ಹೋಗಲಾಡಿಸಿ, ಇಲ್ಲಿನ ಜನರಿಗೆ ಆರೋಗ್ಯ ಪೂರಕ ಸೌಲಭ್ಯ ಮತ್ತು ಅಭಿವೃದ್ಧಿ ಕಲ್ಪಿಸಿಕೊಡಲು ಸಮಾನ ಮನಸ್ಸಕರ ಜತೆ ಚರ್ಚಿಸಿ ಸೂಕ್ತ ಹೋರಾಟ ತುಂಬಾ ಅಗತ್ಯವಾಗಿದೆ ಎಂದು ಚೇತನ್ ಅಹಿಂಸಾ ತಿಳಿಸಿದ್ದಾರೆ.