ಕಾಳಗಿ: ಸೆಲ್ಫಿ ವೇಳೆ ಕಾಲು ಜಾರಿ ನೀರಿಗೆ ಬಿದ್ದ ಸ್ನೇಹಿತನ ರಕ್ಷಣೆ ಹೋಗಿ ಯುವಕ ಸಾವು: ಹೇರೂರು ಡ್ಯಾಂನಲ್ಲಿ ಘಟನೆ, ಶವ ಪತ್ತೆ
ಸೆಲ್ಫಿ ತೆಗೆದುಕೊಳ್ಳುವಾಗ ನೀರಿಗೆ ಬಿದ್ದ ಗೆಳೆಯನನ್ನು ರಕ್ಷಿಸಲು ಹೋಗಿ ಯುವಕನೊಬ್ಬ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿರುವ ದುರ್ಘಟನೆ ಕಾಳಗಿ ಸಮೀಪದ ಹೆರೂರು ಡ್ಯಾಂನಲ್ಲಿ ಭಾನುವಾರ ನಡೆದಿದ್ದು, ಸೋಮವಾರ ಆತನ ಶವ ಪತ್ತೆಯಾಗಿದೆ. ಮೃತ ಯುವಕನನ್ನು ನಗರದ ಟಿಪ್ಪು ಚೌಕ್ ಅಹಮದ್ ನಗರ ಕಾಲೋನಿಯ ನಿವಾಸಿ ಮಹ್ಮದ್ ಹಸನಸಾಬ್ ಅಬ್ದುಲ್ ಗಫೂರ್ ಶೇಖ್ (18) ಎಂದು ಗುರುತಿಸಲಾಗಿದೆ. ಸ್ನೇಹಿತರು ಸೇರಿ ಡ್ಯಾಂಗೆ ಹೋದಾಗ ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಗೆಳೆಯನೊಬ್ಬ ನೀರಿಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಹೋದ ಹಸನಸಾಬ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ, ಸೋಮವಾರ ಬೆಳಗ್ಗೆ ಶೋಧ ಕಾರ್ಯದ ವೇಳೆ ಶವ ಪತ್ತೆಯಾಗಿದೆ.