ಕಲಬುರಗಿ : ಆಳಂದ ಪಟ್ಟಣದಲ್ಲಿ ಹಳೆ ತಹಶಿಲ್ದಾರ್ ಕಚೇರಿಯಿಂದ ದರ್ಗಾದವರೆಗೆ 1.4 ಕಿಮೀವರೆಗೆ ತೆರವು ಕಾರ್ಯಾಚರಣೆ ಮಾಡಲಾಗ್ತಿದೆ.. ತೆರವು ಬಗ್ಗೆ ನಿವಾಸಿಗಳಿಗೆ 3 ಬಾರಿ ನೋಟಿಸ್ ನೀಡಲಾಗಿತ್ತು ಅಂತಾ ಆಳಂದ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನ್ನಶೆಟ್ಟಿ ಹೇಳಿದ್ದಾರೆ.. ಜ2 ರಂದು ಬೆಳಗ್ಗೆ 11 ಗಂಟೆಗೆ ಪಟ್ಟಣದಲ್ಲಿ ಮಾತನಾಡಿದ ಅವರು, ಸೂರು ಕಳೆದುಕೊಂಡವರಿಗೆ ಪರಿಹಾರ ನೀಡುವ ಅಧಿಕಾರ ನಮಗೆ ಇಲ್ಲ.. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆಂದು ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನ್ನಶೆಟ್ಟಿ ಹೇಳಿದ್ದಾರೆ