ಮೈಸೂರು: 6ನೇ ಬಾರಿ ಯಶಸ್ವಿಯಾಗಿ ಅಂಬಾರಿ ಹೊತ್ತು ಸೈ ಎನಿಸಿಕೊಂಡ ಕ್ಯಾಪ್ಟನ್ ಅಭಿಮನ್ಯು
Mysuru, Mysuru | Oct 2, 2025 ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಕೊನೆಯ ದಿನವಾದ ಇಂದು ಜಂಬೂಸವಾರಿ ಮೆರವಣಿಗೆಯಲ್ಲಿ ಕ್ಯಾಪ್ಟನ್ ಅಭಿಮನ್ಯು 6ನೇ ಬಾರಿಗೆ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತು ಕರ್ತವ್ಯ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾನೆ. 59ನೇ ವಯಸ್ಸಿನ ಅಭಿಮನ್ಯು ಆನೆಗೆ ನಿವೃತ್ತಿಯಾಗುವ ಸಾಧ್ಯತೆ ಇದ್ದರೂ ಅಭಿಮನ್ಯುವಿನ ಶಕ್ತಿ ಸಾಮರ್ಥ್ಯ ದಲ್ಲಿ ಯಾವುದೇ ಕ್ಷಮತೆ ಕ್ಷೀಣಿಸಿದ್ದನ್ನು ಕಾಣಲಿಲ್ಲ. ಲಕ್ಷಾಂತರ ಮಂದಿಗೆ ನಾಡಿನ ಅಧಿ ದೇವತೆ ಚಾಮುಂಡೇಶ್ವರಿ ದರ್ಶನ ಭಾಗ್ಯ ಕಲ್ಪಿಸಿದ ಅಭಿಮನ್ಯು ಗೆ ಜನ ಹ್ಯಾಟ್ಸಾಫ್ ಆಫ್ ಹೇಳಿದರು.