ಟಿ–20 ಅಂಧರ ವಿಶ್ವಕಪ್ನಲ್ಲಿ ಭಾರತಕ್ಕೆ ಕೀರ್ತಿ ತಂದ ಮಹಿಳಾ ತಂಡದಲ್ಲಿ ರಿಪ್ಪನ್ಪೇಟೆಯ ಕಾವ್ಯಾ.ವಿ ಕೂಡ ಪ್ರಮುಖ ಪಾತ್ರವಹಿಸಿದ್ದರು. ಅಂತರಾಷ್ಟ್ರೀಯ ಪ್ರಶಸ್ತಿಯಿಂದ ದೇಶವನ್ನು ಬೆಳಗಿಸಿದ ಗೌರವದ ಸಾಧನೆಗೆ ಮಾನ್ಯತೆ ನೀಡಲು ಜಿಲ್ಲಾ ಗೃಹರಕ್ಷಕ ದಳವು ವಿಶಿಷ್ಟ ರೀತಿಯಲ್ಲಿ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿತು. ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಗೃಹರಕ್ಷಕ ಘಟಕದ ಸಿಬ್ಬಂದಿ ಪರೇಡ್ ಮೂಲಕ ಬರುವೆ ಗ್ರಾಮಕ್ಕೆ ತೆರಳಿ, ಕಾವ್ಯಾ.ವಿ ಅವರ ಸ್ವಗೃಹದಲ್ಲಿ ಗುರುವಾರ ಸಂಜೆ 5 ಗಂಟೆಗೆ ಸನ್ಮಾನ ನೆರವೇರಿಸಿದರು. ಪರೇಡ್ ಆಗಮಿಸಿದ ಕ್ಷಣದಲ್ಲಿ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಕರ್ನಾಟಕದಿಂದ ಈ ವಿಶ್ವಕಪ್ ಚಾಂಪಿಯನ್ಷಿಪ್ ತಂಡಕ್ಕೆ ಮೂವರು ಆಟಗಾರ್ತಿಯರು ಆಯ್ಕೆಯಾಗಿದ್ದರು