ಯಲ್ಲಾಪುರ: ಗ್ರಾಮೀಣ ರಸ್ತೆ ನಿರ್ಮಾಣಕ್ಕೆ 9.90 ಕೋಟಿ ಮಂಜೂರು,ಶಾಸಕ ಹೆಬ್ಬಾರ್ ಮಾಹಿತಿ
ಯಲ್ಲಾಪುರ: ತಾಲೂಕಿನ ಮೂಲಸೌಕರ್ಯ ಅಭಿವೃದ್ಧಿಗೆ ತಾಲೂಕಿನಹಿತ್ಲಕಾರಗದ್ದೆ–ಮಾಗೋಡ ಜಿಲ್ಲಾ ಮುಖ್ಯ ರಸ್ತೆ ಹಾಗೂ ನಂದೊಳ್ಳಿ–ಅಣಲಗಾರ ಗೋಪಾಲಕೃಷ್ಣ ದೇವಸ್ಥಾನ (ಗ್ರಾಮೀಣ ರಸ್ತೆ) ನಿರ್ಮಾಣಕ್ಕಾಗಿ ಒಟ್ಟು ₹9 ಕೋಟಿ 90 ಲಕ್ಷ ರೂ. ಅನುದಾನ ಮಂಜೂರಾಗಿರುವುದನ್ನು ತಿಳಿಸಲು ಸಂತಸವಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ. ಈ ಎರಡು ಪ್ರಮುಖ ರಸ್ತೆ ಯೋಜನೆಗಳು ಗ್ರಾಮೀಣ ಭಾಗದ ಸಂಚಾರಕ್ಕೆ ಅನೂಕುಲವಾಗಲಿದೆ ಜನಜೀವನ ಸುಗಮಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ. ವಿಶೇಷವಾಗಿ ಗೋಪಾಲಕೃಷ್ಣ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಯ ನವೀಕರಣವು ಭಕ್ತರ ಸಂಚಾರ, ಸ್ಥಳೀಯ ಕೃಷಿ ಹಾಗೂ ಗ್ರಾಮೀಣ ಆರ್ಥಿಕತೆಗೆ ಬಲ ತುಂಬಲಿದೆ ಎಂದು ತಿಳಿಸಿದ್ದಾರೆ.