ಚಿಕ್ಕಬಳ್ಳಾಪುರ: ಭಾರತಿನಗರದ ಕಲ್ಯಾಣಿಯಲ್ಲಿ ಶವ ಪತ್ತೆ ಚಿಕ್ಕಬಳ್ಳಾಪುರ ನಗರ ಪೊಲೀಸರಿಂದ ಸ್ಥಳ ತನಿಖೆ
ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಭಾರತಿ ನಗರದಲ್ಲಿನ ಕಲ್ಯಾಣಿಯಲ್ಲಿ ಇಂದು ಸೋಮವಾರ ಮಧ್ಯಾಹ್ನ 12ವರೆಸುಮಾರಿನಲ್ಲಿ ಶವ ಪತ್ತೆಯಾಗಿದೆ . ಕಲ್ಯಾಣಿಯಲ್ಲಿ ತೇಲುತ್ತಿದ್ದ ಶವದ ಬಗ್ಗೆ ಸ್ಥಳೀಯರು ಪೊಲೀಸರಿಗೆ ನೀಡಿದ ಮಾಹಿತಿಯಂತೆ ಚಿಕ್ಕಬಳ್ಳಾಪುರ ನಗರ ಪೊಲೀಸ್ ಸ್ಟೇಷನ್ ಸಬ್ಇನ್ಸ್ಪೆಕ್ಟರ್ ಹೆಚ್. ನಂಜುಂಡಯ್ಯ ಮತ್ತು ತಂಡ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಶವವನ್ನ ಚಿಕ್ಕಬಳ್ಳಾಪುರ ನಗರದ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಕಲ್ಯಾಣಿಯಲ್ಲಿನ ಶವದ ಬಗ್ಗೆ ಹೆಚ್ಚಿನ ತನಿಖೆಗೆ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.