ತಾಲೂಕಿನ ಹುಣಸಗೇರಾ ಗ್ರಾಮದಲ್ಲಿ ಮುಖ್ಯರಸ್ತೆಗೆ ಹೊಂದಿಕೊಂಡ ಬಹುತೇಕ ಮನೆಯಂಗಳಕ್ಕೆ ಚರಂಡಿ ತ್ಯಾಜ್ಯ ನುಗ್ಗಿ ಗ್ರಾಮಸ್ಥರಲ್ಲಿ ರೋಗಭೀತಿ ಕಾಡುತ್ತಿದೆ. ಕಳೆದ ಒಂದು ವರ್ಷದಿಂದ ಸಮಸ್ಯೆ ಉದ್ಭವ ಆಗಿದ್ದು ವಿವಿಧ ಹಂತದ ಚುನಾಯಿತ ಪ್ರತಿನಿಧಿ, ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಕಾರಣ ಸಮಸ್ಯೆ ಬಗೆ ಹರಿಸುವತ್ತ ಗಮನಹರಿಸಬೇಕು ಎಂದು ಈ ಮೂಲಕ ಬುಧವಾರ ಬೆಳಿಗ್ಗೆ 11ಕ್ಕೆ ಮನವಿ ಮಾಡಿದರು.