ಅರಸೀಕೆರೆ:ಪಟ್ಟಣದ ಮುಜವಾರ್ ಮೊಹಲ್ಲಾದಲ್ಲಿ ಇಬ್ಬರು ಶಾಲಾ ವಿದ್ಯಾರ್ಥಿಗಳ ನಡುವೆ ನಡೆದಿದ್ದ ಕ್ಷುಲ್ಲಕ ಜಗಳ ಅಂತಿಮವಾಗಿ ಒಬ್ಬನ ತಂದೆಯ ಜೀವ ಕಸಿದ ಹೃದಯವಿದ್ರಾವಕ ಘಟನೆ ನಡೆದಿದೆ.ಕೊಲೆಯಾದ ವ್ಯಕ್ತಿ ತೌಫಿಕ್ (28) ಎಂದು ಗುರುತಿಸಲಾಗಿದೆ. ತೌಫಿಕ್ ಹಾಗೂ ಫರಾನ್ ಎಂಬವರ ಪುತ್ರರು ಅರಸೀಕೆರೆಯ ಖಾಸಗಿ ಶಾಲೆಯಲ್ಲಿ ಓದುತ್ತಿದ್ದು, ಆಗಸ್ಟ್ 25ರಂದು ಶಾಲೆಯ ಆವರಣದಲ್ಲಿ ಇಬ್ಬರ ನಡುವೆ ಸಣ್ಣ ಗಲಾಟೆ ನಡೆದಿತ್ತು. ಈ ವಿಚಾರದ ಹಿಂದೆ ಇಬ್ಬರ ಕುಟುಂಬಗಳ ನಡುವೆ ಅಸಮಾಧಾನ ಹುಟ್ಟಿಕೊಂಡಿತ್ತು.ನಾಲ್ಕು ದಿನಗಳ ಹಿಂದೆ ಅರಸೀಕೆರೆಯ ಬಿಎಚ್ ರಸ್ತೆಯಲ್ಲಿರುವ ಲಸ್ಸಿ ಅಂಗಡಿಯಲ್ಲಿ ತೌಫಿಕ್ ಮತ್ತು ಫರಾನ್ ಮುಖಾಮುಖಿಯಾಗಿದ್ದು, ಮಕ್ಕಳ ಜಗಳದ ವಿಚಾರವನ್ನು ಚರ್ಚಿಸುವಾಗ ಗಲಾಟೆ ತೀವ್ರಗೊಂಡಿತ್ತು.