ಹರಿಹರದ ಶಾಸಕ ಬಿ.ಪಿ. ಹರೀಶ್ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಅವರನ್ನು ಫೊಮೆರಿಯನ್ ನಾಯಿಗೆ ಹೋಲಿಕೆ ಮಾಡಿರುವುದನ್ನು ಸಮಾಜ ಸೇವಕ ಮಹಿಳಾ ತಂಡದವರು ಖಂಡಿಸಿದ್ದು, ಶಾಸಕರನ್ನು ತಕ್ಷಣವೇ ಬಂಧಿಸಬೇಕೆAದು ಮನವಿ ಮಾಡಿದ್ದಾರೆ. ಸಮಾಜ ಸೇವಕರಾದ ಮಂಜಮ್ಮ, ಸಾವಿತ್ರಮ್ಮ, ಸಲ್ಮಾಬಾನು ಇವರು ದಾವಣಗೆರೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸಂಜೆ ಅಪರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ.