ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಜುಮಲಾಪುರ ದೊಡ್ಡ ತಂಡದ ಬಳಿಯಲ್ಲಿನ ಮಾನಪ್ಪನ ದೊಡ್ಡಿಯ ಬಳಿ ಕೃಷ್ಣಾ ನದಿಯ ನಡುಗಡ್ಡೆಗೆ ಮೇಯಲು ಹೋಗಿದ್ದ ಆರು ಮೇಕೆಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಮಂಗಳವಾರ ಮಧ್ಯಾನ ನಡೆದಿದೆ. ಆರು ಮೇಕೆಗಳು ಕೊಚ್ಚಿಕೊಂಡು ಹೋಗಿದ್ದು ಇನ್ನೂ ಐದು ಮೇಕೆಗಳು, ಮರಳಿ ಬರುವಾಗ ನಡುಗಡ್ಡೆಗೆ ಸಿಲುಕಿ ಪರದಾಟವನ್ನು ನಡೆಸುತ್ತಿವೆ. ನಾರಾಯಣ ಕವಿತಾ ಹಾಗೂ ಗೌರಮ್ಮ ಎನ್ನುವವರಿಗೆ ಸೇರಿದ ತಲಾ ಎರಡು ಎರಡು ಮೇಕೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಇನ್ನುಳಿದ ಐದು ಮೇಕೆಗಳು ನಾರಾಯಣ ಎನ್ನುವವರಿಗೆ ಸೇರಿದ್ದು ಬರಲಾಗದೆ ನೀರಿನಲ್ಲಿ ಸಿಲುಕಿ ಪರದಾಡುತ್ತಿವೆ.