ಆನೆ ದಾಳಿಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದು ಅರಣ್ಯ ಇಲಾಖೆ ಯಾವುದೇ ನೆರವು ನೀಡಿಲ್ಲ ಎಂದು ಆನೆದಾಳಿಗೊಳಗಾದ ಬಂಗಾರಚಾರಿ ಆಕ್ರೋಶ ಹೊರಹಾಕಿದರು. ಚಾಮರಾಜನಗರ ಸಿಮ್ಸ್ ಆಸ್ಪತ್ರೆಯಲ್ಲಿ ಭಾನುವಾರ ಮಾತನಾಡಿ, ಕಳೆದ ಶುಕ್ರವಾರ ರಾತ್ರಿ ಬಂಡೀಪುರದಲ್ಲಿ 3 ಆನೆಗಳಲ್ಲಿ ಒಂದಾನೆ ಏಕಾಏಕಿ ದಾಳಿ ಮಾಡಿತ್ತು, ನಾನು ಹಾಗೂ ಅತ್ತಿಗೆ ಗಾಯಗೊಂಡು ಮನೆ ತಲುಪಿದ್ದೆವು. ಅದಾದ ಬಳಿಕ, ತಾಲೂಕು ಆಸ್ಪತ್ರೆಗೆ ಅರಣ್ಯ ಸಿಬ್ಬಂದಿ ಕರೆತಂದು ಬಿಟ್ಟ ಬಳಿಕ ಯಾವುದೇ ನೆರವನ್ನು ನೀಡಿಲ್ಲ, ಚಿಕಿತ್ಸಾ ವೆಚ್ಚವನ್ನು ಭರಿಸಿಲ್ಲ ಎಂದು ಅಳಲು ತೋಡಿಕೊಂಡರು. ರಸ್ತೆಬದಿ ಬದಿಯಲ್ಲಿ ಕಳೆ ಗಿಡಗಳು ಬೆಳೆದು ನಿಂತಿರುವುದರಿಂದ ಆನೆಗಳು ಇರುವುದು ದ್ವಿಚಕ್ರ ವಾಹನ ಸವಾರರಿಗೆ ಗೊತ್ತಾಗುವುದಿಲ್ಲ ಎಂದರು.