ಹನೂರು ಪಟ್ಟಣದ ಲೊಕ್ಕನಹಳ್ಳಿಗೆ ತೆರಳುವ ಮುಖ್ಯ ರಸ್ತೆ ಗೌತಮ್ ಶಾಲೆಯ ಬಳಿ ರಸ್ತೆ ಗುಂಡಿ ಬಿದ್ದು ಮಳೆ ನೀರು ನಿಂತು ಸಂಚಾರಕ್ಕೆ ತೊಂದರೆ ಆಗುತ್ತಿದೆ. ಹನೂರಿನಿಂದ ಲೊಕ್ಕನಹಳ್ಳಿ ಮಾರ್ಗವಾಗಿ ತಮಿಳುನಾಡಿಗೆ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದು ದಿನ ನಿತ್ಯ ಸಾವಿರಾರು ವಾಹನಗಳು ಸಂಚಾರಿಸುತ್ತವೆ. ಕಳೆದ ಒಂದು ವರ್ಷದಿಂದ ಸಂಪೂರ್ಣವಾಗಿ ರಸ್ತೆ ಹದಗೆಟ್ಟಿದೆ. ಮಳೆ ಬಂದ ವೇಳೆ ನೀರು ಗುಂಡಿಯಲ್ಲಿ ನಿಂತು ಓಡಾಡಲು ತೊಂದರೆ ಉಂಟಾಗುತ್ತದೆ. ಶಾಲೆಯ ವಿದ್ಯಾರ್ಥಿಗಳು ಹಾಗೂ ಬೈಕ್ ಸವಾರರು ಸಹ ಗುಂಡಿಯಲ್ಲಿ ಜಾರಿ ಬಿದ್ದಿರುವ ಘಟನೆ ನಡೆದಿದೆ.