ಸರ್ಕಾರ ಕೃಷ್ಣ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಬಾಗಲಕೋಟೆಯ ರೈತರ ಹಕ್ಕುಗಳ ಹೋರಾಟ ಸಮೀತಿ ಮುಖಂಡ ರವಿ ಕುಮಟಗಿ ಒತ್ತಾತಿಸಿದ್ದಾರೆ.ಬಾಗಲಕೋಟೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು,ಸರ್ಕಾರಗಳ ನಿರ್ಲಕ್ಷ್ಯದ ಪರಿಣಾಮ ಯುಕೆಪಿ ಯೋಜನಾ ವೆಚ್ಚ ಹೆಚ್ಚಿದೆ.ನೀರಾವರಿ ಸಚಿವ ಡಿಸಿಎಂ ಡಿಕೆ ಶಿವಕುಮಾರ್ ಅವರು ಎರಡು ಲಕ್ಚ ಕೋಟಿ ರೂಪಾಯಿ ಎಲ್ಲಿಂದ ಹೊಂದಿಸುವುದು ಎಂದು ಮಾತನಾಡಿರುವುದು ಸರಿಯಲ್ಲ.ಸರ್ಕಾರ ಮುಂದಿನ ಆರಯ ವರ್ಷಗಳ ಕಾಲ ಪ್ರತೀವರ್ಷ ನಲವತ್ತು ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಬೇಕು ಯೋಜನೆ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದ್ದಾರೆ.